Posted in Uncategorized
Posted in Uncategorized
Posted in Uncategorized
Posted in Uncategorized
ಪ್ರತಿವರ್ಷ ಗೌರಿಹಬ್ಬ ಬಂತೆಂದರೆ ಸಾಕು ಅದಕ್ಕೆ ಒಂದೆರಡು ವಾರಗಳಮುಂಚೆ ಅದರ ಪೂರ್ವ ತಯಾರಿಶುರುವಾಗುತ್ತೆ.ಅದರಲ್ಲಿ ಪ್ರಮುಖವಾದುದು ಹೆಣ್ಣುಮಕ್ಕಳಿಗೆ ಮಂಗಳ ದ್ರವ್ಯಗಳನ್ನು ಕೊಡುವ ಒಂದು ಸುಂದರ ಸನ್ನಿವೇಶ. ತಮ್ಮ ಹೆಣ್ಣು ಮಕ್ಕಳು ಹಾಗೂ ಅಕ್ಕ ತಂಗಿಯರು ದೂರದ ಊರುಗಳಲ್ಲಿದ್ದರೆ ಮಂಗಳದ್ರವ್ಯಕ್ಕಾಗಿ ಮನಿಆರ್ಡರ್ ಮೂಲಕ ಹಣ ಕಳುಹಿಸುವ ಪದ್ದತಿ ಇದೆ.ಈ ದಿನಗಳಲ್ಲಿ ಅಂಚೆ ಇಲಾಖೆಯ ಮನಿ ಆರ್ಡರ್ ಕೌಂಟರ್ ಗಳಲ್ಲಿ ಸಾಲು ಗಟ್ಟಿ ನಿಂತು ಹಣ ಕಳುಹಿಸುವ ದೃಶ್ಯವನ್ನು ನಿತ್ಯವೂ ನೋಡ ಬಹುದು.ಹತ್ತಿರದಲ್ಲಿ ಮಕ್ಕಳು, ಅಕ್ಕ ತಂಗಿಯರಿದ್ದರೆ ಅವರನ್ನು ಕರೆಸಿಕೊಂಡು ಅಥವಾ ಅವರ ಮನೆಗೇ ಹೋಗಿ ಮಂಗಳದ್ರವ್ಯಗಳು, ಹಣ್ಣು,ತೆಂಗಿನಕಾಯಿ, ಹೂ ಗಳನ್ನು ಕೊಡುವ ಪದ್ದತಿ ಇದೆ. ಮುಂಬರುವ ಗೌರಿಹಬ್ಬವನ್ನು ಸಂತೋಷವಾಗಿ ಆಚರಿಸಲೆಂದು ಬೆಳೆದುಬಂದಿರುವ ಈ ಸಂದರ್ಭದಲ್ಲಿ ಅಣ್ಣ-ತಮ್ಮಂದಿರಿಂದ ಸಕಾಲದಲ್ಲಿ ಮಂಗಳ ದ್ರವ್ಯಗಳು ತಲುಪದಿದ್ದಾಗ ಅಕ್ಕ ತಂಗಿಯರಿಂದ ಆಕ್ಷೇಪಣೆಗಳನ್ನು ಕೇಳುವ ಸಂದರ್ಭಗಳೂ ಬರುತ್ತವೆ.ಇದೆಲ್ಲಾ ಸರ್ವೇ ಸಾಮಾನ್ಯ. ಆದರೆ ನಾವು ಕೆಲಸ ಮಾಡುವ ಕಛೇರಿಗಳಲ್ಲಿ ಇಂತಹಾ ಒಂದು ಕಾರ್ಯಕ್ರಮ ಮಾಡಬಹುದೇ? ನಮ್ಮ ಕಛೇರಿಯಲ್ಲಿ ನಮ್ಮೊಡನೆ ನಿತ್ಯವೂ ಹತ್ತಾರು ಗಂಟೆಗಳ ಕಾಲ ಕೆಲಸ ಮಾಡುವ ನಮ್ಮ ಸಹ ಉದ್ಯೋಗಿಗಳಲ್ಲಿ ನಮ್ಮ ಅಕ್ಕ-ತಂಗಿಯರ,ಅಣ್ಣ-ತಮ್ಮಂದಿರ ಭಾವನೆ ಬೆಳೆಸಲು ಸಾಧ್ಯವಿಲ್ಲವೇ?
ನಾನು ಕೆಲಸ ನಿರ್ವಹಿಸುವ ಹಾಸನ ವಿದ್ಯುತ್ ಉಪಕೇಂದ್ರದಲ್ಲಿ ಈ ರೀತಿಯ ಒಂದು ಪ್ರಯೋಗವು ಕಳೆದ ವರ್ಷದಿಂದ ಶುರುವಾಗಿದೆ. ಉಪಕೇಂದ್ರದಲ್ಲಿ ನನ್ನೊಡನೆ ಹತ್ತಾರು ನೌಕರರು. ಅದರಲ್ಲಿ ಬಹುಪಾಲು ಸ್ತ್ರೀಯರು. ಇಬ್ಬರುಶುಚಿಗಾರ್ತಿಯರು. ನಮ್ಮದು ಒಂದು ಕುಟುಂಬ.ಸಧ್ಯಕ್ಕೆ ನಾನು ಇಲ್ಲಿನ ಯಜಮಾನ.ಉಳಿದವರೆಲ್ಲಾ ನನ್ನ ಕುಟುಂದ ಸದಸ್ಯರು.ಕಳೆದ ಐದಾರು ವರ್ಷಗಳಲ್ಲಿ ನಮ್ಮ ನಡುವೆ ಒಂದೇ ಒಂದು ಕಹಿ ಪ್ರಸಂಗ ಘಟಿಸಿಲ್ಲ. ಇಲ್ಲಿ ಎಲ್ಲರೂಆನಂದವಾಗಿ ಅವರವರ ಕರ್ತವ್ಯ ನಿರ್ವಹಿಸಿದರಾಯ್ತು. ಬಾಸಿಸಮ್ ಮಾಡುವ ಅಗತ್ಯವಿಲ್ಲ. ಅಚ್ಚು ಕಟ್ಟಾಗಿರಲು ಕೆಲವು ಸಲಹೆ ನೀಡಿದರಾಯ್ತು. ಅದರಂತೆ ಎಲ್ಲಾ ಕೆಲಸಗಳೂ ಸಲೀಸು. ಇಂತಹ ಒಂದು ವಾತಾವರಣವಿರುವ ನಮ್ಮ ಈ ಕೇಂದ್ರದಲ್ಲಿ ಆಗಿಂದಾಗ್ಗೆ ಯಾವುದಾದರೂ ಹೆಸರಲ್ಲಿ ಒಟ್ಟು ಸೇರಿ ಊಟ ಮಾಡುವ , ಹರಟೆ ಹೊಡೆಯುವ ಅವಕಾಶಗಳಿದ್ದೇ ಇರುತ್ತವೆ.ಈ ವರ್ಷದ ಸ್ವಾತಂತ್ರ್ಯೋತ್ಸವ ಸಮಾರಂಭದ ಜೊತೆಗೆ ” ಸ್ತ್ರೀ ಸಹೋದ್ಯೋಗಿಗಳಿಗೆ ಗೌರಿಹಬ್ಬದ ಅರಿಶಿನ-ಕುಂಕುಮ ಕೊಡುವ” ಒಂದು ವಿನೂತನ ಕಾರ್ಯಕ್ರಮವು ನಿನ್ನೆ ನಡೆಯಿತು. ಹಾಸನದ ಸರ್ಕಾರೀ ಕಲಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಟಿ.ಎನ್.ಪ್ರಭಾಕರ್, ಹಾಸನದ ಸ್ಥಳೀಯ ಪತ್ರಿಕೆ “ಹಾಸನ ವಾಣಿಯ” ಸಂಪಾದಕರಾದ ಶ್ರೀ ಮತಿ ಲೀಲಾವತಿ, ಉಪಸಂಪಾದಕಿ ಸುವರ್ಣ,ಇವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಮಾರಂಭದ ಅಧ್ಯಕ್ಷತೆಯನ್ನು ಕೆ.ಪಿ.ಟಿ.ಸಿ.ಎಲ್.ನ ಹಾಸನ ನೋಡಲ್ ಅಧಿಕಾರಿ ಶ್ರೀ ಸಂಪತ್ ಕುಮಾರ್ ವಹಿಸಿದ್ದರು. ಸಮಾರಂಭದ ಕೆಲವು ದೃಶ್ಯಗಳು ಇಲ್ಲಿವೆ.
೧] ಶ್ರೀಮತಿ ಮಂಗಳಾ ಶ್ರೀಧರ್ ರವರಿಂದ ಮಂಗಳ ದ್ರವ್ಯವನ್ನು ಸ್ವೀಕರಿಸುತ್ತಿರುವ ಕೇಂದ್ರದ ಶುಚಿ ಗಾರ್ತಿ ಶ್ರೀ ಮತಿ ನೀಲಮ್ಮ ನವರು.

೨] ಶ್ರೀಮತಿ ಲಲಿತಾರಮೇಶ್ ರವರಿಂದ ಮಂಗಳ ದ್ರವ್ಯವನ್ನು ಸ್ವೀಕರಿಸುತ್ತಿರುವ ಕೇಂದ್ರದ ಸಹಾಯಕಿ ಶ್ರೀಮತಿ ಸುಧಾಮಣಿ.

೩] ಸಮಾರಂಭದ ಕುರಿತು ಕೇಂದ್ರದ ನಿರ್ವಹಣಾ ಇಂಜಿನಿಯರ್ ಶ್ರೀ ಶ್ರೀಧರರಿಂದ ಪ್ರಾಸ್ತಾವಿಕ ನುಡಿಗಳು

೪] ಸಮರಂಭದಲ್ಲಿ ಉಪಸ್ಥಿತ ಸಹೋದ್ಯೋಗಿ ಮಿತ್ರರು

Posted in Uncategorized
Posted in Uncategorized
Posted in Uncategorized
Posted in Uncategorized
Posted in Uncategorized
Posted in Uncategorized








